Sampradaayada Haadu On Goddess Gowri Lyrics

॥ Sampradaayada Haadu on Goddess Gowri Lyrics ॥

ಪೂಜಿಸುವೆನು ದೇವಿಯ ಶ್ರೀನಿತ್ಯಗೌರಿಯ
ಪೂಜಿಸುವೆನು ದೇವಿಯ ॥

ಮೃಗಧರ ಮೌಳಿಯ ಜಗದೋದ್ಧಾರಂಬೆಯ
ನಿಗೆ ಮನದಲಿ ಧ್ಯಾನಿಸಿ ಆಚಮನವನಿತ್ತು ॥

ಪಂಚಮ ವಾಣಿಯ ಪಂಚರಿಕಾಂಬೆಯ
ಪಂಚತತ್ವದಿ ಜಲದಿ ಮುದದಿಂದ ತೊಳೆಯುತ ॥

ಸುಂದರಹಾಸೆಯ ಸೌಂದರ್ಯಲಹರಿಯ
ಚಂದ್ರಧಾರಿಯ ಉಡಿಸಿ ಕಂಚುಕವ ತೊಡಿಸಿ ॥

ಜಯಜಯ ಮಾತೆಯ ಜಯಜಯ ಗೌರಿಯ
ಜಯದೇವಿ ಕರುಣಿಸು ನೀ ವರಪ್ರಸಾದವನು ॥

pUjisuvenu dEviya SrInityagouriya
pUjisuvenu dEviya ॥

mRugadhara mouLiya jagadOddhAraMbeya
nige manadali dhyAnisi Achamanavanittu ॥

paMchama vANiya paMcharikAMbeya
paMchatatvadi jaladi mudadiMda toLeyuta ॥

suMdarahAseya souMdaryalahariya
chaMdradhAriya uDisi kaMchukava toDisi ॥

jayajaya mAteya jayajaya gouriya
jayadEvi karuNisu nI varaprasAdavanu ॥

ಬೆಳಗುವೆನಾರತಿಯ ಶ್ರೀಗೌರಿಗೆ
ರಜತಗಿರಿಯಲಿ ವಾಸಿಪ ದೇವಿಗೆ ।ಬೆಳಗುವೆನಾರತಿಯಾ ॥

ಸೇವೆಯನರಿಯದ ಭಾವುಕ ಜನರಿಗೆ
ಭಾವನೆಯಿಂದಲಿ ವರವೀವಳಿಗೆ ।ಬೆಳಗುವೆನಾರತಿಯಾ ॥

ಭಕುತರ ಸೇವೆಗೆ ಮುಕುತಿಯ ನೀಡುವ
ಸಕಲಾಭರಣೆಗೆ ಪಾವನ ಚರಿತೆಗೆ ।ಬೆಳಗುವೆನಾರತಿಯಾ ॥

ಬಿಂಕದಿ ಮೆರೆವರ ಬಿಂಕವ ಮುರಿಯುವ
ಶಂಕರ ಶಿವನ ರಾಣಿಗಾನಂದದಿ ।ಬೆಳಗುವೆನಾರತಿಯಾ ॥

beLaguvenAratiya SrIgourige
rajatagiriyali vAsipa dEvige ।beLaguvenAratiyA ॥

sEveyanariyada bhAvuka janarige
bhAvaneyiMdali varavIvaLige ।beLaguvenAratiyA ॥

bhakutara sEvege mukutiya nIDuva
sakalAbharaNege pAvana charitege ।beLaguvenAratiyA ॥

biMkadi merevara biMkava muriyuva
shaMkara shivana rANigAnaMdadi ।beLaguvenAratiyA ॥

ಪಾಹಿ ಪಾರ್ವತಿ ನಿನಗೆ ಮಾಡುವೆನಾರತಿ
ಪಾಲಿಸೆಂದು ಪದಕೆ ಎರಗಿ ಸ್ತುತಿಸಿ ಬೇಡುವೆ ॥

See Also  Lalithambika Divya Ashtottara Shatanama Stotram In Tamil

ಪರ್ವತಸುತೆ ಪರಮೇಶನ ಸತಿ
ಗಿರಿಜೆ ನಿನಗೆ ಹರಳಿನಾರತಿ ಹರುಷದಿಂದಲಿ ॥

ಅಂಬುಜಾಂಬಕಿ ಅಂಬ ಕಂಬುಕಂಧರಿ
ರಂಭೆ ನಿನಗೆ ಹರಳಿನಾರತಿ ಹರುಷದಿಂದಲಿ ॥

ಶಕ್ತಿರೂಪಳೆ ಅಂಬ ಮುಕ್ತಿದಾಯಕಿ
ತಪ್ಪ ಕ್ಷಮಿಸಿ ರಕ್ಷಿಸೆನ್ನ ಸರ್ಪವೇಣಿಯೆ ॥

pAhi pArvati ninage mADuvenArati
pAliseMdu padake eragi stutisi bEDuve ॥

parvatasute paramEshana sati
girije ninage haraLinArati haruShadiMdali ॥

aMbujAMbaki aMba kaMbukaMdhari
raMbhe ninage haraLinArati haruShadiMdali ॥

shaktirUpaLe aMba muktidAyaki
tappa kShamisi rakShisenna sarpavENiye ॥