Folks Song On Lord Ganesha In Kannada

Lord Ganesha Folks Song in English:

॥ Lord Ganesha Folks Song Kannada Lyrics ॥

ಗಣಪತಿ ನಿನ್ನ ಸ್ತುತಿ ಮಾಡತೀನಿ ಸಭೆಯಾಗ
ಕೊಡು ಮತಿ ವಿದ್ಯೆಯ ದಯ ಕರುಣ
ಝನನನ ನನನನ ಝಂಕಾರ ನುಡಿಸುತ
ತಾಳದೊಳಗೆ ಮಾಡುವೆ ಶರಣ ॥

ಏಕದಂತ ಚತುರ್ಭುಜ ಶಂಖಚಕ್ರ ಹಿಡಿದುಕೊಂಡು
ಸರ್ರರರ ಬಂದು ಇಳಿದ ಧರೆಯೊಳಗ
ಹತ್ತಿ ಬಂದು ಇಲಿಯ ಮ್ಯಾಲ ಸುತ್ತಮುತ್ತ ಯಾರಿಲ್ಲ
ಹೊತ್ತಿಗೆ ಹಿಡಿದಾನೊ ಬಲಗೈಯಾಗ ॥

ನೀತಿವಂತ್ರ ಮನೆಗ್ ಹೋಗಿ ಊಟ ಮಾಡಿ ಬರುವಾಗ
ತತ್ತರ್ಸಾಡಿ ಬಿದ್ದ ನಡುದಾರಿಯೊಳಗ
ಫಡಡಡ ಹೊಟ್ಟೆ ಒಡೆದು ಪಾಯಸ ಹೊರಗೆ ಬಂದು
ಧಡಡಡ ತುಂಬಿದ್ ಕೆರೆ ಒಡೆದ್ಹಾಂಗ ॥

ಬಳಿಬಳಿದು ತುಂಬುತ್ತಾನೊ ಸರ ಹಿಡಿದು ಹಾಕುತ್ತಾನೊ
ಚಂದ್ರಾನು ನೋಡಿ ನಕ್ಕ ಗಣಪತಿಗೆ
ಅತಿಶಯ ಕೋಪದಿಂದ ಚಂದ್ರಮಗೆ ಹೇಳುತ್ತಾನೆ
ಚೌತಿ ದಿನ ನೋಡಬಾರ್ದು ನಿಮ್ಮ ಕಿರಣ ॥

See Also  Shiva Upanishad In Kannada