Folks Song On Lord Ganesha In Kannada – ಮಣ್ಣಿನ ಗಣಪತಿ

Lord Ganesha Folks Song in English:


॥ Lord Ganesha Folks Song Kannada Lyrics ॥

ಮಣ್ಣಿನ ಗಣಪತಿ ಮಾಡಿ ತಂದ ಗುಡಿಗಾರಂಗಪ್ಪ
ಚಿನ್ನದ ಬಣ್ಣವ ಬಳಸಿದ ನಮ್ಮ ನೆರೆಕರೆ ಚಿನ್ನಪ್ಪ ॥

ಅಂಗಿಶಾಲನು ಹೊಲಿದು ಕೊಟ್ಟ ದರ್ಜಿ ಬಸವಪ್ಪ
ಚೌತಿಯ ದಿನ ಶೃಂಗಾರವ ಮಾಡಿದ ನಮ್ಮ ದೊಡ್ಡಪ್ಪ ॥

ಎಳ್ಳಿನ ಉಂಡೆ ಅರಳು ಕಜ್ಜಾಯ ಗಣಪನ ಎದುರಲ್ಲಿ
ತಿನ್ನಲು ಬಾಯನು ತೆರೆಯನು ನಮ್ಮ ಮಣ್ಣಿನ ಗಣಪತಿ ॥

ಚೆನ್ನಾಗಿ ತಿಂದೆವು ನಮ್ಮನು ಮಿಟಿಮಿಟಿ ನೋಡುತ ಕುಳಿತಿದ್ದ
ಮೆಲ್ಲನೆ ಒಂದಿನ ಸಿಟ್ಟಲಿ ಗಣಪತಿ ನೀರಿಗೆ ಹಾರಿದ್ದ ॥

ನೀರಿನ ತಳದಲಿ ಚಿಂತಿಲಿ ಗಣಪತಿ ದಿನದಿನ ಕರಗಿದ್ದ
ಮಣ್ಣಿನ ಗಣಪತಿ ಮಣ್ಣಿನೊಂದಿಗೆ ಸೇರಿ ಮಾಯವಾದ ॥

See Also  Ganesha Hrudaya Kavacham In Sanskrit