ನಾಲ್ಕು ವೇದಗಳನ್ನು ಒಳಗೊಂಡಿರುವ ಗಾಯತ್ರಿ ಮಂತ್ರವು ಅತ್ಯಂತ ಪವಿತ್ರವಾದದ್ದು. ಗಾಯತ್ರಿ ಮಂತ್ರವನ್ನು ಪಠಿಸುವುದರಿಂದ ಅನೇಕ ಆಧ್ಯಾತ್ಮಿಕ ಹಾಗೂ ಆರೋಗ್ಯಕರ ಪ್ರಯೋಜನಗಳೂ ಇವೆ. ಆದರೆ ಗಾಯತ್ರಿ ಮಂತ್ರವನ್ನು ಪಠಿಸುವಾಗ ಕೆಲವೊಂದು ನಿಯಮಗಳನ್ನೂ ಮನಸ್ಸಿನ್ಲಲಿಟ್ಟುಕೊಳ್ಳಬೇಕಾಗುತ್ತದೆ. ಈ ಕುರಿತು ಹೆಚ್ಚಿನ ಮಾಹಿತಿ ಈ ಲೇಖನದಲ್ಲಿದೆ.
ಹಿಂದೂ ಧರ್ಮದಲ್ಲಿ ವೇದ ಮತ್ತು ಪುರಾಣಗಳಿಗೆ ವಿಶೇಷ ಪ್ರಾಮುಖ್ಯತೆಯನ್ನು ನೀಡಲಾಗಿದೆ. ಹಿಂದೂ ಗ್ರಂಥಗಳನ್ನು ಒಮ್ಮೆ ತಿರುವಿದರೆ ನಮಗೆ ಹೆಚ್ಚಾಗಿ ಕಾಣುವ ಮಂತ್ರವೆಂದರೆ ಅದು ಗಾಯತ್ರಿ ಮಂತ್ರ. ಈ ಮಂತ್ರವನ್ನು ‘ಸಾವಿತ್ರಿ ಮಂತ್ರ’ ಎಂದೂ ಕರೆಯಲಾಗುತ್ತದೆ. ಇದು ಅತ್ಯಂತ ಪ್ರಭಾವಶಾಲಿ ಮಂತ್ರವಾಗಿದೆ.
ಮೊದಲ ಬಾರಿಗೆ, ಈ ಮಂತ್ರವು ಋಗ್ವೇದದಲ್ಲಿ ಕಾಣಿಸಿಕೊಂಡಿತು. ಇದು ಹಿಂದೂ ಪಠ್ಯವಾಗಿ, (ಕ್ರಿ.ಪೂ 1100 – ಕ್ರಿ.ಪೂ 1700 ರ ನಡುವೆ ಬರೆಯಲಾಗಿದೆ). ಭಗವದ್ಗೀತೆಯ ಪುಸ್ತಕದಲ್ಲಿ.
ಗಾಯತ್ರಿ ಮಂತ್ರ:
ಓಂ ಭೂರ್ಭುವಃ ಸ್ವಃ ।
ತತ್ಸವಿತುರ್ವರೇಣ್ಯಂ ।
ಭರ್ಗೋ ದೇವಸ್ಯ ಧೀಮಹಿ ।
ಧಿಯೋ ಯೋನಃ ಪ್ರಚೋದಯಾತ್ ॥
Gayatri Mantra in English:
Aum Bhur Bhuvah Svah ।
Tat Savitur Varenyam
Bhargo Devasya Dheemahi ।
Dhiyo Yo nah Prachodayat ॥
Gayatri Mantra Meaning:
O, Divine mother, our hearts are loaded up with darkness. Kindly make this darkness distant from us and advance brightening inside us.
ಗಾಯತ್ರಿ ಮಂತ್ರದಲ್ಲಿನ ಪ್ರತಿಯೊಂದು ಪದದ ಅರ್ಥ:
ಓಂ– ಸರ್ವಶಕ್ತ ದೇವರು
ಭೂರ್- ನಾವು ಹುಟ್ಟಿದ ಭೂಮಿ
ಭುವ- ಜೀವನದ ಎಲ್ಲಾ ಸಮಸ್ಯೆಗಳನ್ನು ನಾಶಮಾಡುವವನು
ಸ್ವಹ- ಜೀವನಕ್ಕೆ ಸಂತೋಷವನ್ನು ತರುವವನು
ತತ್- ಸರ್ವೋಚ್ಚ ದೇವರು
ಸವಿತೂರ್- ಸೂರ್ಯನಂತೆ ಹೊಳೆಯುವುದು
ವರೇಣ್ಯಂ- ಅತ್ಯುತ್ತಮ
ಭರ್ಗೋ- ಸೂರ್ಯನ ಕಿರಣದಂತಹ ಶುದ್ಧತೆ
ದೇವಸ್ಯ- ದೇವರಿಗೆ ಸೇರಿದವರು
ಧೀಮಹಿ- ಸ್ವ-ಗುಣವಾಗಲು ಯೋಗ್ಯವಾಗಿರುವುದು
ದಿಯೋ- ಬುದ್ಧಿಶಕ್ತಿ
ಯೋ– ಯಾರು
ನಃ – ನಮ್ಮ
ಪ್ರಚೋದಯಾತ್- ಒಳ್ಳೆಯ ಕಾರ್ಯಗಳಿಗೆ ಪ್ರೇರಣೆ
ಗಾಯತ್ರಿ ಮಂತ್ರದ ಪ್ರಯೋಜನಗಳು:
- ಇದು ನಮ್ಮ ಕಂಠಪಾಠ ಸಾಮರ್ಥ್ಯ ಮತ್ತು ಕಲಿಕೆಯ ಶಕ್ತಿಯನ್ನು ಹೆಚ್ಚಿಸುತ್ತದೆ.
- ಮನಸ್ಸನ್ನು ಕೇಂದ್ರೀಕರಿಸುವಲ್ಲಿ ಸಹಾಯಕವಾಗಿದೆಯೆಂದು ಸಾಬೀತಾಗಿದೆ.
- ಪ್ರಕ್ಷುಬ್ಧ ಮನಸ್ಸನ್ನು ಶಾಂತಗೊಳಿಸುತ್ತದೆ.
- ಆಧ್ಯಾತ್ಮಿಕತೆಯ ಹಾದಿಯತ್ತ ಸಾಗಲು ಇದು ಮೊದಲ ಹೆಜ್ಜೆ.
- ಇದು ಭಕ್ತನನ್ನು ಎಲ್ಲಾ ಜೀವನದ ಅಡೆತಡೆಗಳಿಂದ ರಕ್ಷಿಸಿ, ಅಂತಃಪ್ರಜ್ಞೆಯಿಂದ ದೈವಿಕ ಕಡೆಗೆ
- ಮಾರ್ಗದರ್ಶನ ನೀಡುತ್ತದೆ.
- ಮಾನಸಿಕ ಶಾಂತಿ, ಮತ್ತು ಸಂತೋಷವನ್ನು ಕೊಡುತ್ತದೆ.
- ಮುಖದ ಮೇಲೆ ಹೊಳಪು ತಂದು, ಉತ್ತಮ ಇಂದ್ರಿಯಗಳ ಬೆಳವಣಿಗೆಗೆ ಸಹಾಯ ಮಾಡುತ್ತದೆ.
- ಕೋಪ ಕಡಿಮೆ ಮಾಡಿ ಬುದ್ಧಿವಂತಿಕೆಯನ್ನು ಹೆಚ್ಚಿಸುತ್ತದೆ.
ಗಾಯತ್ರಿ ಮಂತ್ರವನ್ನು ಜಪಿಸುವುದು ಹೇಗೆ?
ಗಾಯತ್ರಿ ಮಂತ್ರವನ್ನು ಯಾವಾಗ ಬೇಕಾದರೂ ಪಠಿಸಬಹುದು. ಆದರೆ ಪುರಾಣ ಪಠ್ಯಗಳ ಪ್ರಕಾರ, ದಿನದಲ್ಲಿ 3 ಬಾರಿ ಜಪಿಸಬೇಕು.ಮಂತ್ರ ಪಠಿಸುವಾಗ ಪಾಲಿಸಬೇಕಾದ ಕೆಲವು ನಿಯಮಗಳು ಇವೆ. ಅವುಗಳೆಂದರೆ,
- ಜಪ ಮಾಡುವಾಗ ಯಾವಾಗಲೂ ನಿಮ್ಮ ಕಣ್ಣುಗಳನ್ನು ಮುಚ್ಚಬೇಕು.
- ಮಂತ್ರವನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಿ, ಪ್ರತಿಯೊಂದು ಪದದ ಮೇಲೆ ಕೇಂದ್ರೀಕರಿಸಿ.
- ಪ್ರತಿಯೊಂದು ಪದದ ಉಚ್ಚಾರಣೆ ಸರಿಯಾಗಿರಬೇಕು.
- 108 ಮಣಿ ರುದ್ರಾಕ್ಷಿ ಅಥವಾ ತುಳಸಿ ಮಾಲೆಯಲ್ಲಿ ಮಂತ್ರವನ್ನು ಜಪಿಸುವುದರಿಂದ ಆತ್ಮ ಮತ್ತು ಹೃದಯ ಶುದ್ಧೀಕರಣಗೊಂಡು, ಮನಸ್ಸು ಮತ್ತು ದೇಹ ಶಾಂತವಾಗುತ್ತದೆ.
- ಇದನ್ನು ಮೂರು ಸಮಯದ ಅವಧಿಯಲ್ಲಿ ಪಠಿಸಬೇಕು – ಬೆಳಿಗ್ಗೆ (ಸೂರ್ಯೋದಯಕ್ಕೆ 2 ಗಂಟೆ ಮೊದಲು),
- ದಿನದ ಮಧ್ಯದಲ್ಲಿ ಮತ್ತು ಸಂಜೆ (ಸೂರ್ಯಾಸ್ತದ ನಂತರ 1 ಗಂಟೆ).
- ಬೆಳಿಗ್ಗೆ ಪಠಣ ಮಾಡುವಾಗ, ಪೂರ್ವಕ್ಕೆ ಮುಖ ಮಾಡಬೇಕು. ಸಂಜೆ ಪಠಣ ಮಾಡುವಾಗ, ಪಶ್ಚಿಮಕ್ಕೆ ಮುಖ ಮಾಡಬೇಕು.
- ಈ ಮಂತ್ರವನ್ನು ಬೆಳಿಗ್ಗೆ ಸಮಯದಲ್ಲಿ, ಖಾಲಿ ಹೊಟ್ಟೆಯಲ್ಲಿ ಪಠಿಸುವುದು ಒಳ್ಳೆಯದು.